ರೀಲ್‌ಬಾಕ್ಸ್ ಮೂಲಕ `ಉಗ್ರಂ`ಚಿತ್ರ ಅಂತರ್ರಾಷ್ಟ್ರೀಯ ಮಾರುಕಟ್ಟೆಗೆ
Posted date: 11 Tue, Mar 2014 – 11:20:56 PM

ಬೆಂಗಳೂರು, ಮಾರ್ಚ್ ೭, ೨೦೧೪: ಹೊಸ ಪೀಳಿಗೆಯ ಬೇಡಿಕೆಆಧಾರಿತ ವಿಡಿಯೋಆಧಾರಿತ ಮನೋರಂಜನೆ ಸೇವೆಗಳನ್ನು ಒದಗಿಸುತ್ತಿರುವರೀಲ್‌ಬಾಕ್ಸ್ ಸಂಸ್ಥೆ, ಸ್ಯಾಂಡಲ್‌ವುಡ್ ಹೊಸ ಯಶಸ್ವಿ ಉಗ್ರಂ ಚಿತ್ರವನ್ನುಅಂತರ್ರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಇಂಕ್‌ಫಿನೈಟ್ ಪಿಕ್ಚರ‍್ಸ್‌ನ ಸಹಯೋಗದೊಂದಿಗೆರೀಲ್‌ಬಾಕ್ಸ್‌ಅಮೆರಿಕ, ಆಸ್ಟ್ರೇಲಿಯ, ಯುಎಇ ಮತ್ತುಜರ್ಮನಿಯಲ್ಲಿರುವರೀಲ್‌ಬಾಕ್ಸ್‌ಗ್ರಾಹಕರಿಗೆಉಗ್ರಂಚಿತ್ರವನ್ನು ವೀಕ್ಷಿಸುವಅವಕಾಶವನ್ನುಕಲ್ಪಿಸಲಿದೆ.
ಚೊಚ್ಚಲ ಚಿತ್ರವನ್ನು ನಿರ್ದೇಶಿಸಿದ ಪ್ರಶಾಂತ್ ನೀಲ್ ಮತ್ತುಇಂಕ್‌ಫಿನೈಟ್ ಪಿಕ್ಚರ‍್ಸ್ ನಿರ್ಮಾಣದಉಗ್ರಂಚಿತ್ರವನ್ನು ಮೊದಲ ಬಾರಿಗೆಕೋಲಾರಗೋಲ್ಡ್ ಫೀಲ್ಡ್ಸ್‌ನಲ್ಲಿರುವಚಿನ್ನದಗಣಿಯ ಸಯನೈಡ್ ರಾಶಿಯ ಹೊರಗೆಚಿತ್ರಿಸಲಾಗಿದೆ. ಆರಂಭದಿಂದಕೊನೆಯವರೆಗೂಕುತೂಹಲ ಕೆರಳಿಸುವ ಉಗ್ರಂತನ್ನಅತ್ಯುತ್ತಮಚಿತ್ರಕಥೆಯಿಂದಾಗಿಓಟವನ್ನು ಕಾಯ್ದುಕೊಳ್ಳುತ್ತದೆ.
ವೈ ಫೈ ಸಂಪರ್ಕ ಬಳಸಿಕೊಂಡು ಟೆಲಿವಿಷನ್‌ನಎಚ್‌ಡಿಎಂಐ ಪೋರ್ಟ್‌ಗೆ ಪ್ಲಗ್ ಮಾಡಬಹುದಾದ ಮೀಡಿಯಾ ಸ್ಟ್ರೀಮಿಂಗ್ ಡಾಂಗಲ್ (ಎಂಎಸ್‌ಡಿ) ಮೂಲಕ ರೀಲ್‌ಬಾಕ್ಸ್‌ಗ್ರಾಹಕರಿಗೆ ಚಿತ್ರಗಳನ್ನು ತಲುಪಿಸುತ್ತದೆ. ಪ್ರತಿಚಿತ್ರಕ್ಕೆ ಇಷ್ಟು ಎಂಬ ಶುಲ್ಕವನ್ನು ನಿಗದಿಪಡಿಸುತ್ತದೆ. ರೀಲ್‌ಬಾಕ್ಸ್‌ಎಂಎಸ್‌ಡಿಚಿತ್ರ ವೀಕ್ಷಣೆಯ ಬಗೆಯನ್ನೇ ಬದಲಿಸುತ್ತದೆ. ಎಚ್‌ಡಿ ೫.೧ ಡಾಲ್ಬಿ ಸೌಂಡ್ ಬಳಸಿಕೊಂಡು ಎಲ್ಲ ಖಂಡಗಳಲ್ಲಿಯೂ ಚಿತ್ರಗಳನ್ನು ಸ್ಟ್ರೀಮಿಂಗ್ ಮಾಡುವ ಪರವಾನಿಗಿಯನ್ನುಇದು ಪಡೆದುಕೊಂಡಿದೆ.
ಅಂತರ್ರಾಷ್ಟ್ರೀಯ ವೀಕ್ಷಕರ ಬಳಿ ಉಗ್ರಂಚಿತ್ರಕೊಂಡೊಯ್ಯುತ್ತಿರುವುದಕ್ಕೆ ಸಂತಸವಾಗುತ್ತಿದೆ. ಕನ್ನಡಿಗರು ಈ ಸಾಹಸ ಪ್ರಧಾನಚಿತ್ರವನ್ನು ಖುಷಿಯಿಂದ ನೋಡಲಿದ್ದಾರೆ. ಅತ್ಯುತ್ತಮ ವಸ್ತುವನ್ನುಅತ್ಯುತ್ತಮ ಮಾರುಕಟ್ಟೆಯಲ್ಲಿ ವೀಕ್ಷಿಸುವ ವೇದಿಕೆಯನ್ನುರೀಲ್‌ಬಾಕ್ಸ್‌ಕಲ್ಪಿಸುತ್ತಿದೆ ಎಂದುರೀಲ್‌ಬಾಕ್ಸ್‌ನ ನಿರ್ದೇಶಕ ಮತ್ತು ಸಹ ಸ್ಥಾಪಕ ಕೆ.ಜಿ. ರಘು ಹೇಳಿದರು.
ಇಂಕ್‌ಫಿನೈಟ್ ಪಿಕ್ಚರ‍್ಸ್‌ನ ನಿರ್ದೇಶಕ ಪ್ರಶಾಂಗ್ ನೀಲ್ ಮಾತನಾಡಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅನಿವಾಸಿ ಭಾರತೀಯರ ಬಳಿಯೂ ನಮ್ಮ ಚಲನಚಿತ್ರ ಹೋಗುತ್ತಿರುವುದು ನಿಜಕ್ಕೂ ಸಂತಸದ ವಿಷಯ. ರೀಲ್‌ಬಾಕ್ಸ್‌ನತಂತ್ರಜ್ಞಾನ ಮತ್ತುಕನ್ನಡ ಸಿನಿಮಾಗಳ ವಿತರಣಾ ಮಾದರಿ ನಿಜಕ್ಕೂ ಶ್ಲಾಘನೀಯ. ಇದು ಕೇವಲ ಉಗ್ರಂಚಿತ್ರಕ್ಕೆ ಮಾತ್ರವಲ್ಲಇಡೀಕನ್ನಡಚಿತ್ರರಂಗಕ್ಕೂಅತ್ಯುತ್ತಮಕೊಡುಗೆ ಎಂದು ಪ್ರಶಂಸಿಸಿದರು.
ರೀಲ್‌ಬಾಕ್ಸ್‌ಕುರಿತು:
ರೀಲ್‌ಬಾಕ್ಸ್ ಮೀಡಿಯಾಎಂಟರ್‌ಟೇನ್‌ಮೆಂಟ್ ಪ್ರೈ ಲಿ ೨೦೧೨ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಹೈ ಡೆಫಿನೀಷನ್ ವೀಡಿಯೋಗಳನ್ನು ಓವರ್ ದಿ ಟಾಪ್ (ಓಟಿಟಿ) ಬ್ರಾಡ್‌ಬ್ಯಾಂಡ್‌ಆಧಾರಿತ ವೀಡಿಯೋಆನ್‌ಡಿಮ್ಯಾಂಡ್ ಮೂಲಕ ಪೂರೈಸುತ್ತಿದೆ. ಮೀಡಿಯಾ ಸ್ಟ್ರೀಮಿಂಗ್ ಡೋಂಗಲ್‌ಗಳ ಮೂಲಕ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದೆ. ಪ್ರಸ್ತುತರೀಲ್‌ಬಾಕ್ಸ್‌ಕನ್ನಡ ಚಿತ್ರಗಳ ತನ್ನ ಬೃಹತ್ ಸಂಗ್ರಹದ ಮೂಲಕ ಕನ್ನಡಿಗ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದೆ. ಮುಂದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಚಿತ್ರಗಳಿಗೂ ಇದನ್ನು ವಿಸ್ತರಿಸುವಗುರಿ ಹೊಂದಿದೆ. ಜಾಗತಿಕವಾಗಿರೀಲ್‌ಬಾಕ್ಸ್‌ನ ಸೇವೆಗಳು ಅಮೆರಿಕದಲ್ಲಿ ಲಭ್ಯವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed